ಸ್ನೇಹಿತರೆ
ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ
ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ
ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು
ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು
, ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ.
“ ಪಥ್ಯ ತಪ್ಪಾದಾಗ ಔಷಧಿಯ
ಪ್ರಯೋಜನವಿಲ್ಲ
ಪಥ್ಯ ಸರಿಯಿದ್ದಾಗ
ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.
*ಕಾಯಿಲೆಗಳು*
1)
ಫ್ರೈನೋಡರ್ಮ –
ಈ
ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ
ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.
2)
ಕ್ವಾಷಿಯೋರಕರ್ -
ಪ್ರೋಟಿನಗಳ ಕೊರತೆಯಿಂದಾಗಿ ಈ ರೋಗವು ಕಂಡುಬರುತ್ತದೆ.ಇದರ
ಲಕ್ಷಣ ನೋಡುವುದಾದರೆ ಕುಂಠಿತ ಬೆಳವಣಿಗೆ, ಊದಿಕೊಂಡ ಉದರ, ಮಾಂಸ ಖಂಡಗಲ ಜೊತು ಬಿಳುವಿಕೆ, ಚರ್ಮ ಮತ್ತು
ಕೂದಲು ವಿವರ್ಣವಾಗುವುದು, ಬುದ್ದಿ ಮಾಂಧ್ಯತೆ, ಕಂಡುಬರುತ್ತವೆ.
3)
ಪೋಷಣಾ ಮರಾಸ್ಮಸ್ -
ಪ್ರೋಟಿನ
ಮತ್ತು ಕಾರ್ಬೋಹೈಡ್ರೇಟಗಳ ಕೊರೆತೆಯಿಂದ ಈ ರೋಗವು ಬರುತ್ತದೆ. ಕುಂಠಿತ ಬೆಳವಣಿಗೆ, ಎಡಿಮಾ, ಚರ್ಮ
ಮತ್ತು ಕೂದಲು ವಿವರ್ಣವಾಗುವುದು, ಇವೆಲ್ಲಾ ಲಕ್ಷಣಗಳು
ಕಂಡುಬರುತ್ತವೆ.
4)
ಇರುಳುಗಣ್ಣು –
ವಿಟಾಮಿನ ಎ ಕೊರತೆಯಿಂದಾಗಿ ಈ ರೋಗವು
ಬರುತ್ತದೆ.ಮಬ್ಬು ಬೆಳಕಿನಲ್ಲಿ ನೋಡಲು ಅಸಾಧ್ಯವಾಗುವುದು, ಕಣ್ಣುಗಳ ಶುಶ್ಕತೆಈ ರೋಗದ ಲಕ್ಷಣವಾಗಿರುತ್ತದೆ.
5)
ಬೆರಿ ಬೆರಿ –
ವಿಟಾಮಿನ ಬಿ ಕೊರತೆಯಿಂದಾಗಿ ಈ ರೋಗವು ಕಂಡುಬರುತ್ತದೆ,
ಸ್ನಾಯುಗಲ ಬಲಹೀನ, ಜೋಮ್ಮು ಹಿಡಿಯುವುದು, ಕುಂಠಿತ ಬೆಳವಣಿಗೆ, ಈ ರೋಗದ ಲಕ್ಷಣವಾಗಿದೆ.
6)
ಸ್ಕರ್ವಿ –
ವಿಟಾಮಿನ
ಸಿ ಕೊರತೆಯಿಂದಾಗಿ ಈ ರೋಗವು ಕಂಡುಬರುತ್ತದೆ, ಒಸಡುಗಳು ಮತ್ತು ಆಂತರಿಕಕ ಅಂಗಗಳಲ್ಲಿ ರಕ್ತಸ್ರಾವ
ಕಂಡುಬರುತ್ತದೆ. ನಿಶ್ಯಕ್ತಿ, ರಕ್ತಹೀನತೆ, ಕಾಲುಗಲಲ್ಲಿ ಊತ ಇವು ಈ ರೋಗದ ಲಕ್ಷಣವಾಗಿದೆ.
7)
ಸರಳ ಗಳಗಂಡ –
ಈ ರೋಗ ವು ಅಯೋಡಿನ ಕೊರತೆಯಿಂದ ಬರುತ್ತದೆ. ಥೈರಾಯಿಡ ಗ್ರಂಥಿಯ
ಊತದಿಂದ ಗಂಟಲು ವಿಸ್ತೃತಗೊಳ್ಳುತ್ತದೆ, ಚಯಾಪಚಯ ಕ್ರಿಯೆ ಮೇಲೆ ಅಡ್ಡ್ ಪರಿಣಾಮಬಿರುತ್ತದೆ .
8)
ರಕ್ತಹೀನತೆ –
ಈ ರೋಗವು ವಿಟಾಮಿನ್ ಬಿ12 ಕೊರತೆಯಿಂದ ಬರುತ್ತದೆ. ರಕ್ತದಲ್ಲಿ ಕೆಂಪು ರಕ್ತಕಣಗಲ ಸಂಖ್ಯ ಕುಂಠಿತವಾಗುತ್ತದೆ,ಹೀಮೊಗ್ಲೋಬಿನ ಪ್ರಮಾಣ ಗಣನೀಯವಾಗಿ
ಕಡಿಮೆಯಾಗುತ್ತದೆ.
ಸ್ನೇಹಿತರೆ ಪೋಷಕಾಂಶಗಳು ನಿಯಮಿತವಾಗಿ ದೊರೆಯದಿದ್ದರೆ ನ್ಯುನತಾ ಕಾಯಿಲೆಗಳು ಬರುತ್ತವೆ. ಆದ್ದರಿಂದ
ಆಹಾರದಲ್ಲಿ ಪೊಷಕಾಂಸಯುಕ್ತ ಆಹಾರ ಸೇವನೆ ಇರಲಿ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ