ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
12ನೇ ತರಗತಿಯ ಇತಿಹಾಸ . ಭಾರತದಲ್ಲಿನ ಇಂದಿನ ಜನಸಂಖ್ಯಯು ವಿವಿಧ ಜನಾಂಗಗಳ ಮಿಶ್ರಣವಾಗಿದೆ,ದಕ್ಷೀಣ ಭಾರತವೆ ಮಾನವನ ಮೊದಲ ವಾಸಸ್ಥಾನ. * ಹಳೆ ಶೀಲಾಯುಗ - ಇದನ್ನು ಪ್ಯಾಲಿಯೊಲಿಥಿಕ ಏಜ್ ಎಂದು ಕರೆಯುವರು.ಇದು ಕ್ರಿ ಪೂ 40,000 ರಿಂದ 10,000 ವರೆಗಿತ್ತು. ಈ ಕಾಲದ ಮಾನವರು ಕಲ್ಲು ಕಟ್ಟಿಗೆ ಎಲುಬಿನ ಹಿಡಿಕೆಗಳನ್ನು ಬಳಸುತಿದ್ದರು, ಈ ಕಾಲದ ಜನರು ಕ್ವಾರ್ಟಜೈಟ ಎಂಬ ಗಡುಸಾದ ಕಲ್ಲುಗಳನ್ನು ಬಳಸುತ್ತದ್ದರಿಂದ ಈ ಜನರನ್ನು ಕ್ವಾರ್ಟಝಾಯಿಟಮೆನ್ ಎಂದು ಕರೆಯುತ್ತಿದ್ದರು. ಹಳೆ ಶಿಲಾಯುಗದ ಜನರು ನಿಗ್ರೊ ಜನಾಂಗಕ್ಕೆ ಸೆರಿದವಾಗಿದ್ದು ಇವರ ಎತ್ತರ ಕಡಿಮೆ ಹಾಗೂ ಕಪ್ಪು ಚರ್ಮ ಒರಟು ಕೂದಲನ್ನು ಹೊಂದ್ದಿದ್ದರು. ಮಧ್ಯಶಿಲಾಯುಗ - ಇದರ ಅವಧಿಯು ಸುಮಾರು 10,000 ದಿಂದ 8000 ದ ಮಧ್ಯದಲ್ಲಿ ಇರುತದ್ದೆಂದು ಅಂದಾಜಿಸಲಾಗಿದೆ, ಈ ಅವಧಿಯಲ್ಲಿ ಮಾನವ ಬಳಸುತ್ತಿದ ಸಲಕರಣೆಗಳು ಅತ್ಯಂತ ಚಿಕ್ಕದಾಗಿದ್ದವು ಇಲ್ಲಿ ಮಾನವನ್ನು ಬೆಟೆಗಾರನು, ಸಂಗ್ರಾಹಕನು, ಮತ್ತು ಮೀನುಗಾರನು ಆಗಿದ್ದನು. ಹೊಸ ಶಿಲಾಯುಗ - ಈ ಯುಗವನ್ನು ನೀಯೊಲಿಥೀಕ ಯುಗವೆಂದು ಕರೆಯುವರು,ಇದರ ಕಾಲಾವಧಿ ಕ್ರಿ ಪೂ 8,000 ದಿಂದ 4,000 ವರೆಗೆ ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಈ ಯುಗದ ಮನುಷ್ಯನು ಉಳುಮೆಯನ್ನು ಕಲಿತು ವಿವಿಧ ಪ್ರಾಣಿಗಳನ್ನು ಸಾಕಲು ಪ್ರಾರಂಭಿಸಿದ. ಹಾಗೂ ಈ ಕಾಲದ ಮನುಷ್ಯನು ಗುಹೆ...