ವಿಷಯಕ್ಕೆ ಹೋಗಿ

ಕಾಯಿಲೆಗಳು ಮತ್ತು ಕಾರಣಗಳು ಅವುಗಳ ಲಕ್ಷಣಗಳು

  ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು   ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು,    ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ .     “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ     ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ.   *ಕಾಯಿಲೆಗಳು*   1)      ಫ್ರೈನೋಡರ್ಮ –                     ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ.   2)      ಕ್ವಾಷಿಯೋರಕರ್‌   -                    ...

ನವ ಯುಗದಲ್ಲಿ ನಲುಗುತ್ತಿರುವ ಯುವಕರು.

                


ಹಾಯ್‌ ಸ್ನೇಹಿತರೆ  ಇತಿಚೀನ ದಿನಗಳಲ್ಲಿ  ಯುವ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಇಂದಿನ ರಾಜಕಾರಣಿಗಳು  ಹಾಗೂ ಮಾದ್ಯಮಗಳು, ಇವರನ್ನು ಅನುಕರಣೆ ಮಾಡುತ್ತಿರುವ ಯುವ ಸಮುದಾಯವು ತಮ್ಮ ಜೀವನದ ಅರಿವಿಲ್ಲದೆ ಮಾದಕ ವ್ಯಸನಿಗಳಾಗುತಿರುವ ಯುವಕರು ತಮ್ಮನ್ನು ನಂಬಿದವರಿಗೆ ಯಾವುದೆ ಪ್ರತಿಫಲ ನೀಡದೆ, ಯಾವುದೋ ಒಂದು ರಾಜಕೀಯ ಪಕ್ಷದ ಗುಲಾಮರಾಗಿ ತಮ್ಮ ಸ್ವಂತಿಕೆಯನ್ನು ಮಾರಾಟ ಮಾಡಿ ಅರೆ ಬೆಂದ ಬುದ್ದಿಯಲ್ಲಿ ಬದುಕಿನ ಹೋರಾಟವನ್ನು ಅರಿಯದೆ ಉಜ್ವಲ್‌ ಭವಿಷ್ಯವನ್ನು ಹಾಳುಮಾಡಿಕೋಳ್ಳುತ್ತಿರುವ ಯುವ ಸಮುದಾಯ.


                    ಅತ್ಯಧಿಕವಾಗಿ ಹೆಚ್ಚುತ್ತಿರುವ ನೀರುದ್ಯೋಗ ಸಮಸ್ಯ ಯುವ ಸಮುದಾಯವನ್ನು ಕಂಗಾಲು ಮಾಡಿದೆ, ಇತೀಚಿಗೆ ಗುಜರಾತನಲ್ಲಿ ನಡೆದ ಇಂಟರವುಹನಲ್ಲಿ ನೂಕು ನುಗ್ಗಲು ಸಂಭವಿಸಿ ವಿಧ್ಯಾರ್ಥಿಗಳು ಕೆಳಗಡೆ ಬೀಳುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೀವೆಲ್ಲಾ ನೋಡಿದ್ದೆವೆ.
                                                                ಅದೆ ರೀತಿಯಾಗಿ ಮುಂಬೈ ಅಂತಹ ಮಹಾನಗರದಲ್ಲಿ ಕೇವಲ 2 ಸಾವಿರ ಹುದ್ದೆಗಳಿಗೆ ಸುಮಾರು ಲಕ್ಷಗಟ್ಟಲೆ ವಿಧ್ಯಾರ್ಥಿಗಳು ಆಗಮಿಸಿದನ್ನು ನೋಡಿದ್ದೆವೆ, ಇಂತಹ ಉದಾಹರಣೆಗಳು ದೇಶದ ತುಂಬಾ ನೋಡಲು ಸಿಗುತ್ತವೆ,  ಗೆಳೆಯರೆ ಇಲ್ಲಿ ಹೇಳ ಹೋರಟಿರುವ ಉದ್ದೇಶವೆನೆಂದರೆ ಇಂದಿನ ರಾಜಕಾರಣಿಗಳು ಯುವ ಸಮುದಾಯವನ್ನು ಉದ್ದ್ಯೋಗವಂತರನ್ನಾಗಿ ಮಾಡದೆ ಅವರನ್ನು ಹಿಂಬಾಲಕರನ್ನಾಗಿ ಮಾಡಿ ಸಮಾಜದಲ್ಲಿ ಪರೋಕ್ಷವಾಗಿ ಅವರಿಂದ ಕುಕ್ರುತ್ಯಗಳಲ್ಲಿ ಭಾಗವಹಿಸುವಂತೆ ಮಾಡಿ ಅವರನ್ನು ಅಪರಾಧ ಲೋಕದ ಅಧಿಪತಿಗಳಾಗಿ ಮಾಡಿತ್ತಿದ್ದಾರೆ, 

ರಾಜಕಾರಣಿಗಳಿಗೆ ಪುಷ್ಟಿನೀಡುವಂತೆ ಮಾದ್ಯಮ ಲೋಕಗಳು ಸಮಾಜದಲ್ಲಿ ವಿಷಬಿತ್ತುವ ಕೆಲಸವನ್ನು ನೇರವಾಗಿ ಮಾಡುತ್ತಿವೆ.
ನೀನೆ ನಡೆದ ಮಹಾರಾಷ್ಟ್ರದ ನಾಗಪುರದಲ್ಲಿ ದಂಗೆಯ ಕುರಿತು ಪ್ರಮುಖ ಹಿಂದಿವಾಹಿನಿಯ ನಿರೂಪಕರೂಬ್ಬರು ಮುಸ್ಲಿಮರ ವಿರುದ್ದ ಹಿಂದುಗಳನ್ನು ಎತ್ತಿ ಕಟ್ಟುವಂತಹ ಕೆಲೆಸವನ್ನು ಅವರು ತಮ್ಮ ನಿರೂಪಣೆಯಲ್ಲಿ ಮಾಡುತಿದ್ದುದನ್ನು ನೂಡಿದೆ,

ದೇಶದಲ್ಲಿ ಈ ರೀತಿಯಾಗಿ ಮುಂದು ವರೆದರೆ ಕೋಮು ಗಲಭೆಗಳು ಹೆಚ್ಚಾಗಿ ದೇಶದಲ್ಲಿ ಅಸ್ಥೀರತೆ ಉಂಟಾಗುತ್ತದೆ.
ಇದರ ಲಾಭ ಪಡೆದ ರಾಜಕೀಯ ನಾಯಕರು ತಾವು ಬೆಳೆದು ತಮ್ಮ ಮಕ್ಕಳನ್ನು ಬೆಳೆಸುತ್ತಿದ್ದಾರೆ , ಇಲ್ಲಿ ಯುವ ಸಮುದಾಯವು ಕೋಮು ಸಂಘರ್ಶದಲ್ಲಿ ಮುಳುಗಿದ್ದು ಕೋನೆಯವರೆಗು ಅವರು ರಾಜಕಾರಣಿಗಳ ಆಳಾಗಿ ಇರುವಂತಹ ಕೆಲಸವನ್ನು ಮಾಡುತ್ತಿದ್ದಾರೆ ,  
                           ಆದ್ದರಿಂದ ಈಗಿನ ಯುವ ಸಮುದಾಯವು ಯಾವುದೆ ದ್ವೇಷದ ಭಾಷಣಕ್ಕೆ ಕಿವಿ ಕೋಡದೆ ತಮ್ಮ ಮುಂದಿನ ಉಜ್ವಲ ಭವಿಷ್ಯವನ್ನು ರುಪಿಸಿಕೂಳ್ಳಬೇಕು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಚುನಾವಣೆ ಆಯೋಗ/Election Commission of India

  ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗ, ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ.  ಇದು ಜನವರಿ 25 1950 ರಂದು ನವದೆಹಲಿಯಲ್ಲಿ ಸ್ಥಾಪನೆಯಾಯಿತು. ದೆಶಾದ್ಯಂತ ಚುನಾವಣೆಗಳು ಮುಕ್ತವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ಇದು ನಡೆಸುತ್ತದೆ. ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ತುಂಬಾ ಮುಖ್ಯವಾದದ್ದು.                                 ಭಾರತದ ಚುನಾವಣಾ ಆಯೋಗ ಭಾರತದ ಸಂವಿಧಾನದ 324 ನೇ ವಿಧಿಯಿಂದ ಚುನಾವಣಾ ಆಯೋಗವು ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದೊಂದು ಸರ್ಕಾರದ ಪ್ರಭಾವದಿಂದ ಸಂಪೂರ್ಣ ಸ್ವಾತಂತ್ರ ಹೊಂದಿದ ಸಾಂವಿಧಾನಿಕ ಸಂಸ್ಥೆಯಾಗಿರುತದೆ. ಪ್ರಾರಂಬದಲ್ಲಿ ಏಕ ಸದಸ್ಯ ಸಂಸ್ಥೆಯಾಗಿದ್ದ ಇದು 1993 ರಲ್ಲಿ ಬಹು ಸದಸ್ಯತ್ವ ಆಯೋಗವಾಯಿತು. ಇದರಲ್ಲಿ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು 2024ರ ಡೇಟಾ ಪ್ರಕಾರ ಸುಮಾರು 97 ಕೋಟಿಗೂ ಹೆಚ್ಚು ಮತದಾರರು ಮತ್ತು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಚುನಾವಣೆಗಳನ್ನು...

KPSC EXAM PREPARATION 2026

ಸ್ಪರ್ಧಾ ವಿಷನ್‌ಗೆ  ತಮ್ಮೆಲ್ಲರಿಗೂ ಸ್ವಾಗತ ! ಇದು ಕೆಪಿಎಸ್ಸಿ, ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್‌ಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾದ ಶೈಕ್ಷಣಿಕ ವೇದಿಕೆ. ಇಲ್ಲಿ ನೀವು ಪಡೆಯುವಿರಿ: ✅ ಸಾಮಾನ್ಯ ಜ್ಞಾನ (GK) ಪ್ರಶ್ನೋತ್ತರಗಳು ✅ ಕರಂಟ್ ಅಫೇರ್ಸ್ (Current Affairs) ✅ ಪಠ್ಯ ಸಾಮಗ್ರಿ ಮತ್ತು ಟಿಪ್ಪಣಿಗಳು ✅ ಅಭ್ಯಾಸ ಕ್ವಿಜ್‌ಗಳು ಮತ್ತು ಮಾದರಿ ಪ್ರಶ್ನೆಗಳು ಸ್ಪರ್ಧಾ ವಿಷನ್ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಸಂಪೂರ್ಣ ಸಂಗಾತಿಯಾಗಿದ್ದು ನಿಮ್ಮ ಅಧ್ಯಯನಕ್ಕೆ ಅನುಕೂಲವಾಗಲೆಂದು ನಾವು ಸ್ಪರ್ಧಾತ್ಮಕ ಸಂಬಂಧಿಸಿದಂತೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ, ಇದರ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಲು ಇಂದಿನ ನಿಮ್ಮ ಪ್ರಯತ್ನ ಮುಂದಿನ ಭವಿಷ್ಯ. 1.ಕರ್ನಾಟಕ ರಾಜ್ಯದ ಮೊದಲ ರಾಮ್ಸಾರ್‌ ತಾಣ ಯಾವುದು ? ರಂಗನತಿಟ್ಟು ಪಕ್ಷಿಧಾಮ ಅಘನಾಶಿನಿ ಅಂಕಸಮುದ್ರ ಯಾವುದು ಅಲ್ಲಾ ✅ Explanation: 2022 ರಲ್ಲಿ ರಾಜ್ಯದ ಮೊದಲ್‌ ರಾಮ್ಸಾರ್‌ ತಾಣವಾಗಿ ಮಂಡ್ಯಜಿಲ್ಲೆಯ ರಂಗನತಿಟ್ಟು ಪಕ್ಷಿಧದಾಮ ಸೆರ್ಪಡೆಯಾಗಿದೆ. 2. ಫೋರ್ಬ್ಸ ಪಟ್ಟಿಯಲ್ಲಿ ದೇಶದ ನಂಬರ್‌ 01 ಮಹಿಳೆ ? ಜಯಶ್ರೀ ನಿರ್ಮಾಲಾ ಸೀತಾರಾಮನ್ ಕಿರಣ ಬೇಡಿ ಯಾರು ಅಲ್ಲ ✅ Ex...

21/08/2026 ರ ಪ್ರಚಲಿತ ಘಟನೆಗಳು

                                         ಪ್ರಚಲಿತ ಘಟನೆಗಳು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.. 1) ಭಾರತದ 100 ನೇ ರಾಮ್ಸಾರ ತಾಣವಾಗಿ ಉತ್ತರ ಪ್ರದೇಶದ ಜೈ ಪ್ರಕಾಶ ನಾರಾಯಣ ಪಕ್ಷೀಧಾಮವನ್ನು ಘೋಷಿಸಲಾಗಿದ್ದು, ಇದು ವಲಸೆ ಮತ್ತು ಸ್ಥಳೀಯ ಪಕ್ಷೀಗಳ ಸಮೃಧ್ದ ವೈವಿದ್ಯೆತೆಗೆ ಪ್ರಸಿದ್ದವಾಗಿದೆ. 2) ಅಂತರಾಷ್ಟ್ರೀಯ ಯೋಗ ದಿನದ ಥೀಮ - yoga for healthy ageying 3) ಭಾರತದ ಮೊದಲ multi lane free flow  ಟೋಲಿಂಗ ವ್ಯವಸ್ಥೆಯನ್ನು ರಾಜಸ್ಥಾನದ ದೌಲತಪುರ ಪ್ಲಾಸಾದಲ್ಲಿ ಪ್ರಾರಂಭಿಸಲಾಗಿದೆ. 4) BRICKS ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ 2026 ನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಮತ್ತು ಇದರ ಅಧ್ಯಕ್ಷತೆಯನ್ನು ಅಜೀತ ಧೋವಲರವರು ವಹಿಸಿಕೊಂಡರು. 5) 2026 ರ ಜಾಗತಿಕ ಪ್ರಮುಖ ತೈಲ ಸಾಗಣೆಯ ಜಲಸಂಧಿಯು ಸೂಯೆಜ್‌ ಜಲಸಂಧಿಯಾಗಿರುತ್ತದೆ. 6) ಹೋರ್ಮುಜ ಜಲಸಂಧೀಯು ಬಂಗಾಳಕೊಲ್ಲಿ ಮತ್ತು ಹಿಂದುಮಾಹಾಸಾಗರವನ್ನು ಸಂಪರ್ಕಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಫಾಲೋ ಮಾಡಿ 🙏