ಗೆಳೆಯರೆ ಇತ್ತೀಚಿನ ದಿನಗಳಲ್ಲಿ ಮಾನವನ ದುರಾಸೆಯಿಂದ ಪ್ರಕ್ರುತಿಯು ವಿನಾಶದತ್ತ ಹೊರಟಿರುವುದನ್ನು ನೀವು ನೋಡಿರಬಹುದು ಹಾಗೂ ಕೆಳಿರಲುಬಹುದು, ಅದಕ್ಕೆ ಸಾಕ್ಷಿ ಎಂಬಂತೆ ಪರಿಸರದ ಮಡಿಲನ್ನು ಅಗೆದು ಬಗೆದು ಅದನ್ನು ನಾಶ ಮಾಡಲು ಹೊರಟ ಮನುಷ್ಯನು ಇಂದು ಅನೇಕ ಪರಿಣಾಮಗಳನ್ನು ಎದುರಿಸುವಂತಹ ಸಂದರ್ಭ ಒದಗಿ ಬಂದಿರುತ್ತದೆ.
ಇತ್ತೀಚಿಗೆ ಅಮೇರಿಕದಲ್ಲಿ ಸಂಬವಿಸಿದ ಅಗ್ನಿ ಅವಘಡ, ತೀವ್ರ ತರನಾದ ಬಿಸಿಲಿನ ಬೆಗೆ, ಅದೇ ತರನಾಗಿ ಜಲಕ್ಷಾಮವು ಕೂಡಾ ಇಂದು ದೊಡ್ಡ ಮಾನವನಿಗೆ ಹಾಗೂ ಪ್ರಾಣಿಗಳಿಗೆ ಸಮಸ್ಯಯಾಗಿ ಪರಿಣಮಿಸಿದೆ.
ಗಾಂಧೀಜಿಯ ಮಾತು ನೆನಪಿಸಿಕೊಳ್ಳುವುದಾದರೆ " ಪರಿಸರವು ಮಾನವನ ಆಸೆಗಳನ್ನು ಈಡೆರಿಸುತ್ತದೆ ದುರಾಸೆಗಳನದನದಲಾ "ಎಂದು ಮಹಾತ್ಮಾ ಗಾಂಧೀಜಿಯವರು ಹೆಳಿದ ಮಾತು ಅಕ್ಷರಸಹ ಸತ್ಯ .
ಇವೆಲ್ಲವುಗಳ ಬಗ್ಗೆ ಅರಿತುಕೊಂಡು ವಿಶ್ವಸಂಸ್ಥೆಯು ಔಪಚಾರಿಕವಾಗಿ 1992 ರ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವ್ರುದ್ದಿ ಸಮ್ಮೇಳನದ ಕಾರ್ಯಸೊಚಿ 21 ರಲ್ಲಿ ಪ್ರಸ್ತಾಪಿಸಲಾಯಿತು. 1992 ರ ಡಿಸೆಂಬರನಲ್ಲಿ ವಿಶ್ವಸಂಸ್ಥೆಯ ಸಾಮನ್ಯ ಸಭೆಯು ನಿರ್ಣಯವನ್ನು ಅಂಗಿಕರಿಸುವ ಮೂಲಕ ಮಾರ್ಚ 22 ವಿಶ್ವ ಜಲದಿನವೆಂದು ಘೋಷಿಸಲಾಯಿತು. ಮೊದಲ ಬಾರಿಗೆ ಮಾರ್ಚ 22 1993 ರಂದು ವಿಶ್ವ ಜಲದಿನವನ್ನು ಆಚರಿಸಿತು.
ಅದೆರೀತಿ ಈ ವರ್ಷ ಕೂಡಾ ಮಾರ್ಚ 22 ರಂದು ವಿಶ್ವ ಜಲದಿನವನ್ನಾಗಿ ಆಚರಿಸಲಾಯಿತು. 2024 ರ ವಿಶ್ವಜಲದಿನದ ಥೀಮ್ ನೋಡುವುದಾದರೆ - " ಶಾಂತಿಗಾಗಿ ನೀರು "
ಅದೆ ರೀತಿಯಾಗಿ 2025 ರ ಥೀಮ್ - " ಹಿಮನದಿ ಸಂರಕ್ಷಣೆ "ಎಂಬ ಶಿರ್ಷಿಕೆಯಡಿ ಆಚರಿಸಲಾಯಿತು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ