ಇದೊಂದು ಭಾರತದಲ್ಲಿನ ಪರೋಕ್ಷ ತೆರಿಗೆಯಾಗಿದ್ದು, ಒಂದು ದೇಶ ಒಂದು ತೆರಿಗೆ ಎಂಬ ಕಲ್ಪನೆಯಲ್ಲಿ ಜಾರಿಗೆ ತರಲಾಗಿದೆ.
ಭಾರತವು ಸುಮಾರು 04 ಮಾದರಿಯ ಜಿ ಎಸ್ ಟಿ ಯನ್ನು ಒಳಗೊಂಡಿದೆ. 1) ಸಿ.ಜಿ.ಎಸ್.ಟಿ 2) ಎಸ್. ಜಿ. ಎಸ್. ಟಿ 3) ಯು.ಜಿ.ಎಸ್.ಟಿ 4) ಐ.ಜಿ.ಎಸ್.ಟಿ
122 ನೇ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆಯನ್ನು ಮಂಡಿಸಿ ರಾಷ್ಟ್ರಪತಿಗಳ ಅಂಕಿತ ಪಡೆದು ನಂತರ, 101 ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆಯಾಗಿ 2017 ಜುಲೈ 01 ರಂದು ಜಾರಿಗೆ ಬಂದಿತು.
279(A) ವಿಧಿ ಅನ್ವಯ ಜಿ.ಎಸ್.ಟಿ ಮಂಡಳಿಯನ್ನು ರಚಿಸಲಾಗಿದೆ. ಇದರ ಪದನಿಮಿತ್ತ ಅಧ್ಯಕ್ಷರು ಹಣಕಾಸು ಸಚಿವರು ಆಗಿರುತ್ತಾರೆ.
ಜಿ.ಎಸ್.ಟಿ ಮಂಡಳಿ ಕಾರ್ಯ :- ಭಾರತದಲ್ಲಿನ ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ನಿರ್ಧರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡು ಜಂಟಿ ವೇದಿಕೆಯಾಗಿ ಕಾರ್ಯನಿರ್ವಹಾಸುತ್ತದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ