ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ
ಹಿಂದೂ ಧರ್ಮದಲ್ಲಿನ ನ್ಯೂನತೆಗಳನ್ನು ಮತ್ತು ಜಟಿಲತೆಗಳನ್ನು ತೊಲಗಿಸುವ
ಮತ್ತು ಸಮಾಜದಲ್ಲಿ ಸಮಾನತೆ ಸಾಧಿಸುವ ಉದ್ದೆಶದ್ದಿಂದ ಹಲವು ಸಮಾಜ ಸುಧಾರಕರು ಬಂದ್ದಿದ್ದಾರೆ ಅವರುಗಳ
ಕುರಿತಾಗಿ ಈ ಮುಂದೆ ತಿಳಿಯೋಣ.
·
ಶಂಕರಾಚಾರ್ಯರು –
·
ಇವರು ಕೆರಳದ
ಕಾಡಿಯಲ್ಲಿ 788 ರಲ್ಲಿ ಜನಿಸಿದರು. ತಂದೆ ಶಿವಗುರು ತಾಯಿ ಆರ್ಯಂಬ. ಇವರು ತಮ್ಮ ಸಾಂಸಾರಿಕ ಜೀವನದಲ್ಲಿ ಆಸಕ್ತಿ ಹೊಂದದೆ ಸನ್ಯಸತ್ವ ಪಡೆದುಕೊಂಡರು,
ನಂತರ ನರ್ಮದ ನದಿ ತೀರದಲ್ಲಿ ತಮ್ಮ ಗುರುಗಳಾದ ಭಗವತ್ವಾದರನ್ನು ಭೇಟಿಯಾದರು. ಶಂಕರಾಚಾರ್ಯರು ದೇಶ್ಯಾದ್ಯಂತ
ಸುಮಾರು 3 ಬಾರಿ ಪ್ರವಾಸ ಮಾಡಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದರು. ಶಂಕರಾಚಾರ್ಯರು ಪ್ರತಿಪಾದಿಸಿದ
ಸಿದ್ದಾಂತ “ಅದ್ವೈತ್ ಸಿದ್ದಾಂತ” ಇವರು ಸರ್ವಜ್ಞ
ಮತ್ತು ಜಗದ್ಗುರು ಎಂಬ ಬಿರುದುಗಳನ್ನು ಹೊಂದಿದ್ರು.
·
ಶಂಕರಾಚಾರ್ಯರು
ಸ್ಥಾಪಿಸಿದ 04 ಮಠಗಳು 1) ಪುರಿಯ ಗೋವರ್ಧನ ಪೀಠ
2) ದ್ವಾರಕೆಯ ಕಾಳಿಕ ಮಠ 3) ಬದರಿನಾಥದ ಜ್ಯೋತೀರ ಮಠ 4) ಶೃಂಗೇರಿಯ ಶಾರದ ಪೀಠ.
ಇವರು ಶಿವ, ವಿಷ್ಣು, ಸೂರ್ಯ,
ಗಣೇಶ, ಶಕ್ತಿ ದೇವರುಗಳ ಪೂಜೆಗೆ ಪ್ರಾಮುಖ್ಯತೆ ನಿಡುವುದರ ಮೂಲಕ ವಿವಿಧ ಪಂಥಗಳನ್ನು ಒಗ್ಗೂಡಿಸುವ
ಕೆಲಸ ಮಾಡಿದರು. ಆದ್ದರಿಂದ ಇವರನ್ನು “ಷಣ್ಮತ ಸ್ಥಾಪನಾಚಾರ್ಯ” ಎಂದು ಕರೆಯಲಾಗಿದೆ.
ಶಂಕರಾಚಾರ್ಯರು ಬರೆದ ಕೃತಿಗಳು - * ಬ್ರಹ್ಮ ಸೂತ್ರ,
ಉಪನಿಷದ, ವಿವೇಕ ಚಿಂತಾಮಣಿ, ಶಿವಾನಂದ ಲಹರಿ, ಸೌಂದರ್ಯ ಲಹರಿ, ಭಜಗೋವಿಂದಂ, ಕೃತಿಗಳನ್ನು ರಚಿಸಿದರು.
ಅದ್ವೈತ್ ಸಿದ್ದಾಂತ – ಇವರ ಪ್ರಕಾರ ಪ್ರಪಂಚ ಮಾಯೆ ಪ್ರಪಂಚ ಒಂದು ಭ್ರಮೆ, ಆತ್ಮ ಪರಮಾತ್ಮ
ಎರಡು ಒಂದೆ, ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದರು.
ರಾಮಾನುಜಚಾರ್ಯ –
ಇವರು
1017 ರಲ್ಲಿ ಚೆನೈ ಸಮೀಪದ ಪೆರಂಬದೂರಿನಲ್ಲಿ ಜನಿಸಿದರು. ತಂದೆ ಸೋಮಯಾಜಿ ತಾಯಿ – ಕಾಂತಿಮತಿ, ಇವರ
ಗುರುಗಳಾದ ಯಾದವ ಪ್ರಕಾಶರರ ಬಳಿ ವಿದ್ಯಾಭ್ಯಾಸ ಮಾಡಿದರು. ರಾಮಾನುಜಚಾರ್ಯರಿಗೆ 16 ನೇ ವಯಸ್ಸಿನಲ್ಲಿ
ತಂಗಮ್ಮಳೋಂದಿಗೆ ಮದುವೆ ಮಾಡಲಾಯಿತು. ಇವರು ತಮ್ಮ ಸಂಸಾರಿಕ ಜೀಔನದಲ್ಲಿ ಅತೃಪ್ತಿ ಹೊಂದಿ ಸನ್ಯಾಸಿಯಾದರು,
ಕರ್ನಾಟಕದಲ್ಲಿ ಹೊಯ್ಸಳರ ಅರಸ ವಿಷ್ಣುವರ್ಧನ ಆಶ್ರಯ ನೀಡಿದನು, ರಾಮಾನುಜಚಾರ್ಯರು ಮೆಲುಕೊಟೆಯಲ್ಲಿ
ಸುಮಾರು 20 ವರ್ಷಗಳ ಕಾಲ ನೆಲೆಸಿದರು.
ರಾಮಾನುಜಚಾರ್ಯರ ಕೃತಿಗಳು –

ವೇದಾಂತಸಾರ,
ವೇದಾಂತ ಸಂಗ್ರಹ, ವೇದಾಂತ ಸೂತ್ರ, ಗೀತ, ಭಾಷ್ಯ, ಶ್ರಿ ಭಾಷ್ಯ,
ವಿಶಿಷ್ಟಾದ್ವೈತ ಸಿದ್ದಾಂತ –
ರಾಮಾನುಜಚಾರ್ಯರು ವಿಶಿಷ್ಟಾದ್ವೈತ ಸಿದ್ದಾಂತ
ಪ್ರತಿಪಾದಿಸಿದರು. ಇವರು ಶೀ ವೈಷ್ಣವ ಅನುಯಾಯಿಗಳಾಗಿದ್ದರು,
ಇವರು ಶಂಕರಾಚಾರ್ಯರ ಮಾಯಾವಾದವನ್ನು ಖಂಡಿಸಿದರು. ಇವರ ಪ್ರಕಾರ ದೇವರಿದ್ದಾನೆ ಪ್ರಪಂಚ ಸತ್ಯ. ಮೋಕ್ಷಕ್ಕೆ
ಭಕ್ತಿ ಒಂದೆ ಮಾರ್ಗ ಎಂದು ಪ್ರತಿಪಾದಿಸಿದರು.
ಇವರು ಜನರನ್ನು ಭೇದಮಾಡದೆ ಎಲ್ಲಾ
ವರ್ಗದ ಜನರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು.
To be Continue̤

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ