ದಿನಗಳು ಕಳೆದಂತೆ ಕಾಲವು ಬದಲಾಗುತ್ತಿರಬಹುದು ಆದರೆ ನಮ್ಮ ಅಸ್ತಿತ್ವ ನನ್ನೆಲ್ಲಾ ಬಿಟ್ಟು ಕೊಟ್ಟು ಬದುಕನ್ನು ಸಾಗಿಸಲಾಗದು ಅದು ಇಂದಾದರು ಸರಿಯೇ ಭವಿಷ್ಯದಲ್ಲಾದರು ಸರಿಯೆ, ಗೆಳೆಯರೆ ಈ ಮಾತುಗಳನ್ನು ಹೇಳಲು ಕಾರಣ ಇಂದಿನ ದಿನಪತ್ರಿಕೆಯಲ್ಲಿನ ಸುದ್ದಿ ನೋಡಿ ಒಂದು ಕ್ಷಣ ಅಚ್ಚರಿಯಾಯಿತು ಕಾರಣ ನಮ್ಮ ಹೆಮ್ಮೆಯ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯಾಗಿ ನಟಿ ತಮನ್ನಾ ರನ್ನು ಕರ್ನಾಟಕ ಸರ್ಕಾರವು ನೇಮಕ ಮಾಡಿದೆ ಇದು ಎಷ್ಟು ಸಮಂಜಸ ?
ಶ್ರೀ ಎಂ ಬಿ ಪಾಟೀಲ್ ರವರನ್ನು ಕೇಳಿದಾಗ ನಟಿ ತಮನ್ನಾ ರವರು ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಸುಮಾರು 2 ಮಿಲಿಯನಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ ಹಾಗೂ ಉತ್ತರ ಭಾರತ ಮತ್ತು ಜಗತ್ತಿನ ವಿವಿಧ ಸ್ಥಳಗಳಲ್ಲಿ ಅವರ ಅಭಿಮಾನಿ ಬಳಗವಿದೆ ಎಂದ ಅವರ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿದೆ.
ಕನ್ನಡದಲ್ಲಿಯೂ ಪ್ಯಾನ ಇಂಡಿಯಾ ನಟರಿದ್ದಾರೆ ಅದೆ ರೀತಿಯಾಗಿ ನಟಿಯರಾದ ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಇನ್ನೂ ಹಲವು ನಟಿ ನಟಿಯರಿದ್ದಾರೆ,
ಸರ್ಕಾರ ಈ ರೀತಿಯಾಗಿ ನಮ್ಮ ಕನ್ನಡದ ಜನರನ್ನು ಮೂಲೆಗುಂಪು ಮಾಡುವ ಅವಶ್ಯಕತೆ ಇತ್ತಾ ?
ಸರ್ಕಾರದ ಈ ನಡೆಯು ಅನುಚಿತವಾದದ್ದು ನಾವು ಕನ್ನಡಿಗರು ನಮ್ಮ ನೆಲ ಜಲ ಕನ್ನಡದ ಅಸ್ತಿತ್ವವನ್ನು ಪ್ರಾಣ ಇರುವವರೆಗೂ ಬಿಟ್ಟು ಕೊಡೇವು, ನಮ್ಮ ಕನ್ನಡದ ಅಸ್ತಿತ್ವಕ್ಕೆ ದಕ್ಕೆ ಬಂದರೆ ಯಾವ ಸರ್ಕಾರಗಳು ಕನ್ನಡಿಗನ ಮುಂದೆ ಉಳಿಯಲಾರವು.
ಪ್ರಸ್ತುತದಲ್ಲಿರುವ ಸರ್ಕಾರ ಕೂಡಲೇ ನಟಿ ತಮನ್ನಾರನ್ನ ಬದಲಾಯಿಸಬೇಕೆಂಬುದು ಅಪ್ಪಟ ಕನ್ನಡಿಗರ ಆಸೆಯಾಗಿದ್ದು, ತತಕ್ಷಣದಿಂದಲೆ ಎಚ್ಚೆತ್ತುಕೊಂಡು ಎಲ್ಲವನ್ನೂ ಸರಿಮಾಡಿದಲ್ಲಿ ಕನ್ನಡ ನಾಡಲ್ಲಿ ಎಲ್ಲವು ಸುಂದರಮಯ.. ತಪ್ಪಿದ್ದಲ್ಲಿ ಸರ್ಕಾರವೆ ಪ್ರತಿಯೊಂದು ಬದಲಾವಣೆಗಳಿಗೆ ನೇರ ಹೊಣೆಗಾರಾಗಬೇಕಾಗುತ್ತದೆ.
ಜೈ ಕನ್ನಡಾಂಬೆ ಜೈ ಕರ್ನಾಟಕ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ