ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಗೆಳೆಯರೆ ಪ್ರಕೃತಿಯಲ್ಲಿನ ಅದೆಷ್ಟೋ ವಿಷಯಗಳ ಬಗ್ಗೆ ಮಾನವನಿಗೆ ಇನ್ನೂ ಕೂಡಾ ಸಂಪೂರ್ಣವಾಗಿ ತಿಳಿಯದೆ ಅದರ ಸಂಶೋದನೆ ಮಾಡುತ್ತಾ ಮನುಷ್ಯರು ಹೊಸ ವಿಷಯಗಳ ತಿಳಿದುಕೊಳ್ಳಲು ಕುತುಹಲದಿಂದ ಸಂಶೋಧನೆಯಲ್ಲಿ ತೊಡಗಿದ್ದಾನೆ.
ಇಂದು ಆಧುನಿಕ ಯುಗದಲ್ಲಿ ಮಾನವ ಆರೋಗ್ಯದ ದೃಷ್ಟಿಯಿಂದ ದಿನೆ ದಿನೇ ಅನಾರೋಗ್ಯದ ಕಡೆಗೆ ಪ್ರಯಾಣಿಸುತ್ತಿದ್ದಾನೆ. ನಮ್ಮ ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರಕುವ ಹಣ್ಣುಗಳು ಅವುಗಳ ಉಪಯೋಗಗಳ ಕುರಿತು ನೋಡುವುದಾದರೆ ಇಂದು ನಾವು " ನಿಂಬೆ ಹಣ್ಣಿನ" ಕುರಿತು ಈ ಲೇಖನದಲ್ಲಿ ನೋಡೋಣ.
1) ಅಜಿರ್ಣತೆ, ಮತ್ತು ಹಸಿವಿನ ತೊಂದರೆ ಅನುಭವಿಸುತ್ತಿದ್ದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನ ಜೊತೆ ನಿಂಬೆ ರಸ ಬೆರೆಸಿ ಸುಮಾರು 5 ದಿನಗಳ ಕಾಲ ಸೇವಿಸಬೇಕು.
2) ನಿಯಮಿತವಾಗಿ ಆಹಾರದಲ್ಲಿ ನಿಂಬೆ ರಸ ಬೆರೆಸಿ ಆಹಾರ ಸೇವಿಸುತ್ತಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
3) ನಿಂಬೆಹಣ್ಣು ವಿಟಮಿನ್ ಸಿ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೋಗದ ವಿರುದ್ಧ ಹೋರಾಡಲು ಸಹಾಯವಾಗುತ್ತದೆ.
4) ಮನುಷ್ಯನ ದೇಹದಲ್ಲಿರುವ ಬೊಜ್ಜು ಮತ್ತು ತೂಕ ಇಳಿಸಲು ಅತ್ಯಂತ ಸಹಕಾರಿಯಾಗಿದೆ.
5) ನಿಂಬೆ ರಸ ಸೇವನೆಯಿಂದ ಚರ್ಮದಲ್ಲಿನ ಮೆಲನಿನ್ ಕಡಿಮೆಯಾಗಿ ಚರ್ಮ ಹೊಳೆಯುವಂತೆ ಕಾಣುತ್ತದೆ.
6) ತೈಲಕ್ಕೆ ನಿಂಬೆ ರಸ ಬೆರೆಸಿ ಮಸಾಜ್ ಮಾಡುವುದರಿಂದ ಕುದಲುಗಳು ಹೊಳೆಯುತ್ತದೆ.
7) ನಿದ್ರಾಹೀನತೆ ಅನುಭವಿಸುತ್ತಿದ್ದರೆ ನಿಂಬೆ ಹಣ್ಣು ರಾತ್ರಿ ಮಲಗುವ ವೇಳೆ ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ನಿದ್ರಾ ಹೀನತೆಯಿಂದ ದೂರವಾಗುವುದು.
ಇದರ ಬಳಕೆಯಿಂದ ಇಷ್ಟೆಲ್ಲಾ ಉಪಯೋಗವಿರುವಾಗ ಇನ್ನು ಮುಂದಾದರು ದಿನ ನಿತ್ಯ ಜೀವನದಲ್ಲಿ ನಿಯಮಿತವಾಗಿ ಆಹಾರದಲ್ಲಿ ನಿಂಬೆ ರಸ ಬಳಕೆಯನ್ನು ಇಂದಿನಿಂದಲೇ ಆರಂಭಿಸಿ.......

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ