1) ಕ್ಯಾಬಿನೆಟ/ಸಚಿವ ಸಂಪುಟ ಎಂಬುದು ?
1) ಮಂತ್ರಿ ಮಂಡಲಕಿಂತ ಸಣ್ಣ ಕೂಟ
2) ಮಂತ್ರಿ ಮಂಡಲಕಿಂತ ದೊಡ್ಡ ಕೂಟ
3) ಮಂತ್ರಿ ಮಂಡಲ
4) ಯಾವುದು ಅಲ್ಲಾ
ಉತ್ತರ : ಮಂತ್ರಿ ಮಂಡಲಕಿಂತ ಸಣ್ಣ ಕೂಟ
( ಕೇಂದ್ರ ಸರ್ಕಾರದ ಪ್ರತಿಯೊಂದು ನಿರ್ಧಾರ , ನಿರ್ವಹಣೆ ಎಲ್ಲವು ಸಚಿವ ಸಂಪುಟವನ್ನು ಅವಲಂಬಿಸಿದೆ. ಈ ಸಚಿವ ಸಂಪುಟದ ಮುಖ್ಯಸ್ಥರು ಪ್ರಧಾನಮಂತ್ರಿಗಳು.)
2) ರಾಷ್ಟ್ರಪತಿ ಕ್ಷಮಾದಾನ ನೀಡುವ ಅಧಿಕಾರವನ್ನು ಸಂವಿಧಾನದ ಯಾವ ವಿಧಿ ತಿಳಿಸುತ್ತದೆ ?
1) 51 ನೇ ವಿಧಿ
2) 72 ನೇ ವಿಧಿ
3) 75 ನೇ ವಿಧಿ
4) 78 ನೆ ವಿಧಿ
ಉತ್ತರ :- 72 ನೇ ವಿಧೀ
( ಯಾವುದೆ ನ್ಯಾಯಾಲಯ ನೀಡಿರುವ ಶಿಕ್ಷೆ/ ಮರಣದಂಡನೆಯ ಶಿಕ್ಷೆಯನ್ನು ಅಮಾನತುಗೊಳಿಸುವ, ಕ್ಷಮಾದಾನ ನೀಡುವ, ಮುಂದುಡುವ / ಬೇರೊಂದು ಶಿಕ್ಷೆಗೆ ಪರಿವರ್ತಿಸುವ ಅಧಿಕಾರ ರಾಷ್ಟ್ರಪತಿ ಹೊಂದಿರುತ್ತಾರೆ.)
3) ಸಿಖ ಧರ್ಮದ ಸ್ಥಾಪಕ ಯಾರು ?
1) ಗುರು ಗೊವಿಂದ
2) ಗರು ತೇಜ್ ಬಹುದ್ದುರ
3) ಗುರುನಾನಕ ದೇವ
4) ಗುರು ಅರ್ಜುನ ದೇವ
ಉತ್ತರ :- ಗುರುನಾನಕ
( ಗುರುನಾನಕ ಪಂಜಾಬಿನ ತಲವಂಡಿ ಗ್ರಾಮದಲ್ಲಿ ಜನಿಸಿದರು. ಸಿಖ್ ರ ಪವಿತ್ರ ಗ್ರಂಥ - ಗುರು ಆದಿಗ್ರಂಥ.ಸಿಖರ 10ನೇಯ ಹಾಗೂ ಕೊನೆಯ ಗುರು ಗೊವಿಂದ ಸಿಂಗ, ನಂತರ ಸಿಖರ ಗ್ರಂಥ ಸಾಹಿಬನ್ನು ಸಿಖಗುರು ಎಂದು ಪರಿಗಣಿಸಲಾಗಿದೆ.)
4) ಮೂರನೆ ಪಾಣಿಪತ್ ಯುದ್ದ ನಡೆದ ವರ್ಷ ?
1) 1526
2) 1857
3) 1757
4) 1761
ಉತ್ತರ :- 1761 ರಲ್ಲಿ
( ಅಫಘಾನಿಸ್ಥಾನದ ದುರಾನಿ ಸಾಮ್ರಾಟ ಮತ್ತು ಮರಾಠರ ನಡುವೆ ನಡೆಯಿತು. ಈ ಯುದ್ದದಲ್ಲಿ ಮರಾಠರು ಸೋತರು, ಜನೆವರಿ 14 1761 ರಲ್ಲಿ ಹರ್ಯಾಯಣದ ಪಾಣಿಪತನಲ್ಲಿ ಈ ಕದನ ನಡೆಯಿತು.)
5) ಗೋಮಟೇಶವರನ ಪ್ರತಿಮೆ ಸ್ಥಾಪಿಸಿದ್ದು ಇವರ ಕಾಲದಲ್ಲಿ ?
1) ಪಲ್ಲವರು
2) ಗಂಗರು
3) ಕದಂಬರು
4) ಮೌರ್ಯರು
ಉತ್ತರ :- ಗಂಗರು
( ಗಂಗರ ಮಂತ್ರಿಯಾದಂತಹ ಚಾವುಂಡರಾಯನು ಕ್ರಿ.ಪೂ. 983 ರಲ್ಲಿ ಶ್ರವಣಬೆಳಗೊಳದಲ್ಲಿ 57 ಅಡಿ ಎತ್ತರದ ಗೋಮಟೇಶ್ವರನ ಮೂರ್ತಿಯನ್ನು ಸ್ಥಾಪಿಸಿದನು.)
6) ಬಾದಾಮಿ ಚಾಲುಕ್ಯರ ಆಸ್ಥಾನಕ್ಕೆ ಭೇಟಿ ನೀಡಿದ ಚೀನೀ ಯಾತ್ರಿಕ ?
1) ಫಾಯಿಯಾನ್
2) ಹ್ಯುವೆನ್ ತ್ಸಾಂಗ
3) ಇತ್ಸಿಂಗ
4) ಹೋಚಿನ್
ಉತ್ತರ :- ಹ್ಯುಯನ್ ತ್ಸಾಂಗ
( ಇವನ ತನ್ನ ಕೃತಿಯಾದ ಸಿ.ಯು.ಕಿ. ಯಲ್ಲಿ ಪುಲಕೆಶಿಯ ಪರಾಕ್ರಮಗಳ ಕುರಿತು ಬರೆದಿದ್ದಾನೆ.)
7) 1905 ರಲ್ಲಿ ಬಂಗಾಳವನ್ನು ವಿಭಜನೆ ಮಾಡಿದವರು ಯಾರು ?
1) ರಿಪ್ಪನ್
2) ಕ್ಯಾನಿಂಗ
3) ಬೆಂಟಿಂಗ್
4) ಕರ್ಝನ್
ಉತ್ತರ :- ಲಾರ್ಡ ಕರ್ಜನ
ಅಕ್ಟೋಬರ 16 1905 ರಂದು ಲಾರ್ಡ ಕರ್ಜನ ಬಂಗಾಳ ವಿಭಜನೆ ಮಾಡುತ್ತಾನೆ.
8) ಮಧ್ಯಯುಗದ ಭಾರತವನ್ನು ಆಳಿದ ಏಕೈಕ್ ಮಹಿಳೆ ?
1) ನೂರ್ ಜಹಾನ
2) ಮುಮ್ತಾಜ ಮಹಲ
3) ರಜಿಯಾ ಸುಲ್ತಾನ
4) ಗುಲ್ ಬದನ ಬೇಗಂ
ಉತ್ತರ :- ರಜಿಯಾ ಸುಲ್ತಾನ
9) ಚಿಲ್ಕ ಸರೋವರ ಯಾವ ರಾಜ್ಯದಲ್ಲಿದೆ ?
1) ಒರಿಸ್ಸಾ
2) ಪಶ್ಚಿಮ ಬಂಗಾಳ
3) ತಮಿಳುನಾಡು
4) ಕೇರಳ
ಉತ್ತರ :- ಒರಿಸ್ಸಾ
10) ಕಪ್ಪು ಮಣ್ಣೀನ ಅತ್ಯಂತ ವಿಸ್ತಾರ ಪ್ರದೇಶ ಹೊಂದಿದ ರಾಜ್ಯ ?
1) ಗುಜುರಾತ
2) ಮಹಾರಾಷ್ಟ್ರ
3) ಕರ್ನಾಟಕ
4) ಸಿಕ್ಕಿಂ
ಉತ್ತರ :- ಮಹಾರಾಷ್ಟ್ರ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ