ಸ್ನೇಹಿತರೆ ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಕುರಿತು ಈಗಾಗಲೇ ತಮಗೆಲ್ಲಾ ಗೊತ್ತಿರುವ ವಿಷಯವಾಗಿದೆ ಇಲ್ಲಿ ನಾವು ಸೆಳೆಯಲು ಹೊರಟಿರುವ ವಿಷಯ S - 400 ಸಿಸ್ಟಮ್ ಕುರಿತಾಗಿ ಕಿರು ಮಾಹಿತಿ ತಮಗಾಗಿ .
ರಷ್ಯಾ-ಚೀನಾಗೆ ಒದಗಿಸಿರುವ S-400 ಸಿಸ್ಟಮ್ಸ್, ಭಾರತಕ್ಕೆ ಒದಗಿಸಿರುವ S-400 ಸಿಸ್ಟಮ್ಸ್ ಮಧ್ಯೆ ತುಂಬಾ ಅಂತರ ಇರುತ್ತದೆ. ಅದೆಷ್ಟು ಅಂತರ ಅಂತಾ ಗೊತ್ತಾ ?... ಚೀನಾದ S-400 ಸಿಸ್ಟಮ್ಸ್ ನ ವ್ಯಾಪ್ತಿ ಕೇವಲ 250 ಕಿ.ಮೀಗಳಿಗೆ ಮಾತ್ರ. ಆದರೆ ಭಾರತದಲ್ಲಿರುವಂತಹ S-400 ಸಿಸ್ಟಮ್ಸ್ ನ ವ್ಯಾಪ್ತಿ 400 ಕಿ.ಮೀ.ಗಳು ಇರುತ್ತವೆ.
ಈ ಅಂತರ ಯಾಕೆ ಬಂದಿದೆ ಅಂದರೆ, Missile Technology Control Regime (MTCR) ನಿಯಮಗಳ ಪ್ರಕಾರ MTCR ಗ್ರೂಪ್ ನಲ್ಲಿ ಇರುವ ದೇಶಗಳಿಗೆ ಮಾತ್ರ *ಪ್ರಪಂಚದಲ್ಲಿ ಇನ್ನುಳಿದ ಯಾವುದೇ ದೇಶವಾದರೂ ಮತ್ತೊಂದು ದೇಶಕ್ಕೆ 300 ಕಿ.ಮೀ.ಗಳಿಗಿಂತ ದೂರ ಪ್ರಯಾಣಿಸುವ ಮಿಸೈಲ್ಸ್ ಅನ್ನು ಮಾರಾಟ ಮಾಡುವ ಅಥವಾ ಖರೀದಿಸುವುದಕ್ಕೆ ಅವಕಾಶವಿಲ್ಲ. ಪ್ರಪಂಚದ ಎಲ್ಲಾ ದೇಶಗಳು ಕಟ್ಟುನಿಟ್ಟಾಗಿ ಈ ನಿಯಮವನ್ನು ಅನುಸರಿಸಬೇಕು. ಅಂದರೆ 300 ಕಿಮೀ ಗಳಿಗಿಂತ ಹೆಚ್ಚು ದೂರ ಪ್ರಯಾಣಿಸುವ ಮಿಸೈಲ್ಸ್ ಅನ್ನು ಖರೀದಿಸಬೇಕೆಂದರೆ ಖಂಡಿತವಾಗಿ MTCR ನಲ್ಲಿ ಸದಸ್ಯತ್ವ ಆಗಿರಲೇಬೇಕು. ಇದರಿಂದಾಗಿ ಮೋದಿಜಿ ಮುಂದಾಲೋಚನೆಯಿಂದ 2015 ಜೂನ್ ನಿಂದ ಈ ಗ್ರೂಪ್ ಲ್ಲಿ ಸೇರಲು ಪ್ರಯತ್ನಗಳನ್ನು ಪ್ರಾರಂಭಿಸಿದರು. ಅಷ್ಟೊತ್ತಿಗೆ ಈ ಗ್ರೂಪ್ ಲ್ಲಿ ಇರುವ 34 ದೇಶಗಳನ್ನು ಒಪ್ಪಿಸಿ, ಸರಿಯಾಗಿ 2016 ಜೂನ್ 27ರಂದು ಭಾರತ ಅಧಿಕೃತವಾಗಿ MTCR ಗ್ರೂಪ್ ಸೇರಿತು. ಅಂದರೆ ಇನ್ನೂ ಭಾರತಕ್ಕೆ ಪೂರ್ತಿಯಾಗಿ S-400 ಸಿಸ್ಟಮ್ಸ್ ಖರೀದಿಸಲು ಇದ್ದ ಅಡಚಣೆಗಳು ಎಲ್ಲಾ ಹೋದವು. ಸರಿಯಾಗಿ ಇದು ನಡೆದ ಕೇವಲ 4 ತಿಂಗಳ ಒಳಗೇ ಅಂದರೆ 2016 ಅಕ್ಟೋಬರ್ ನಲ್ಲಿ ಭಾರತ, ರಷ್ಯಾದಿಂದ ಪೂರ್ತಿ ಸ್ಥಾನ S-400 ಪಡೆಯಲು ಕರಾರು ಮಾಡಿಕೊಂಡಿತು. ಇದರಿಂದ ಭಾರತಕ್ಕೆ 400 ಕಿಮೀ ವ್ಯಾಪ್ತಿ ಇರುವ S-400 ಸಿಸ್ಟಮ್ಸ್ ಗಳು ಭಾರತಕ್ಕೆ ಇದೇ ವರ್ಷ ಡಿಸೆಂಬರ್ ನಲ್ಲಿ ಲಭಿಸಲಿವೆ.
ಆದರೆ ಚೀನಾ MTCR ಗ್ರೂಪ್ ನಲ್ಲಿ ಇಲ್ಲವಾದ್ದರಿಂದ ಕೇವಲ 250 ಕಿಮೀ ವ್ಯಾಪ್ತಿ ಇರುವ S-400 ಸಿಸ್ಟಮ್ಸ್ ಮಾತ್ರ ಖರೀದಿಸಿದೆ. S-400 ಸಿಸ್ಟಮ್ಸ್ ನಲ್ಲಿ 400 ಕಿಮೀ ವ್ಯಾಪ್ತಿ ಅತ್ಯಂತ ಶಕ್ತಿಯುತವಾದ 40N6E ಮಿಸೈಲ್ಸ್ ಇಲ್ಲದೇ ಚೀನಾ S-400 ಸಿಸ್ಟಮ್ಸ್ ಅನ್ನು ಖರೀದಿ ಮಾಡಬೇಕಾಯಿತು. MTCR ಗ್ರೂಪ್ ನ ಸದಸ್ಯತ್ವ ಇಲ್ಲದಿರುವುದರಿಂದ ರಷ್ಯಾ ಕೂಡ ಚೀನಾಗೆ ಯಾವುದೇ ಸಹಾಯ ಮಾಡಲು ಆಗಿರುವುದ್ದಿಲ್ಲಾ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ