ಸ್ನೇಹಿತರೆ ಈ ದಿನ ನಾವು ಮಾನವನಿಗೆ ಬರುವಂತಹ ಕಾಯಿಲೆಗಳು ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳ ಕುರಿತಾಗಿ ನಾವು ಈ ದಿನ ತಿಳಿದುಕೊಳ್ಳೋಣ. ಅನಾರೋಗ್ಯಕ್ಕೆ ಮೂಲ ಕಾರಣವೆ ಆಹಾರದ ಅಸಮತೋಲನ, ಪೋಷಕಾಂಶಯುಕ್ತ ಆಹಾರವು ಮಾನವನ ದೇಹದ ಸಧೃಢತಕೆ ಅತ್ಯವಶ್ಯವಾಗಿದೆ.ಪೋಷಕಾಂಶ ಆಹಾರವು ಕಾರ್ಬೋಹೈಡ್ರೇಟ್ಸ, ಪ್ರೋಟಿನಗಳು, ಲಿಪಿಡಗಳು, ವಿಟಮಿನಗಳು , ಖನಿಜಗಳು, ನಾರು ಇವುಗಳನ್ನು ಒಳಗೊಂಡಿರುತ್ತದೆ . “ ಪಥ್ಯ ತಪ್ಪಾದಾಗ ಔಷಧಿಯ ಪ್ರಯೋಜನವಿಲ್ಲ ಪಥ್ಯ ಸರಿಯಿದ್ದಾಗ ಔಷಧಿಯ ಅಗತ್ಯವಿಲ್ಲ” ಎನ್ನುವ ನಾನ್ನುಡಿಯು ಅತ್ಯದ್ಬುತವಾದ ಸಂದೇಶವನ್ನು ಹೇಳುತ್ತದೆ. *ಕಾಯಿಲೆಗಳು* 1) ಫ್ರೈನೋಡರ್ಮ – ಈ ರೋಗವು ಕೊಬ್ಬಿನ ಕೊರತೆಯಿಂದಾಗಿ ಮಾನವನಿಗೆ ಬರುತ್ತದೆ. ಇದರ ಲಕ್ಷಣಗಳು ಕೈ ಕಾಲು ಬೆನ್ನು, ಪೃಷ್ಠದ ಚರ್ಮದ ಮೇಲೆ ಗುಳ್ಳೆಗಲು ಬರುತ್ತವೆ.ಮತ್ತು ಚರ್ಮವು ಒಣಗಿದಂತಾಗುತ್ತದೆ. 2) ಕ್ವಾಷಿಯೋರಕರ್ - ...
ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗ, ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಜನವರಿ 25 1950 ರಂದು ನವದೆಹಲಿಯಲ್ಲಿ ಸ್ಥಾಪನೆಯಾಯಿತು. ದೆಶಾದ್ಯಂತ ಚುನಾವಣೆಗಳು ಮುಕ್ತವಾಗಿ, ನ್ಯಾಯಯುತವಾಗಿ, ಪಾರದರ್ಶಕವಾಗಿ ಚುನಾವಣೆಗಳನ್ನು ಇದು ನಡೆಸುತ್ತದೆ. ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆ ತುಂಬಾ ಮುಖ್ಯವಾದದ್ದು. ಭಾರತದ ಚುನಾವಣಾ ಆಯೋಗ ಭಾರತದ ಸಂವಿಧಾನದ 324 ನೇ ವಿಧಿಯಿಂದ ಚುನಾವಣಾ ಆಯೋಗವು ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದೊಂದು ಸರ್ಕಾರದ ಪ್ರಭಾವದಿಂದ ಸಂಪೂರ್ಣ ಸ್ವಾತಂತ್ರ ಹೊಂದಿದ ಸಾಂವಿಧಾನಿಕ ಸಂಸ್ಥೆಯಾಗಿರುತದೆ. ಪ್ರಾರಂಬದಲ್ಲಿ ಏಕ ಸದಸ್ಯ ಸಂಸ್ಥೆಯಾಗಿದ್ದ ಇದು 1993 ರಲ್ಲಿ ಬಹು ಸದಸ್ಯತ್ವ ಆಯೋಗವಾಯಿತು. ಇದರಲ್ಲಿ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು 2024ರ ಡೇಟಾ ಪ್ರಕಾರ ಸುಮಾರು 97 ಕೋಟಿಗೂ ಹೆಚ್ಚು ಮತದಾರರು ಮತ್ತು 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಚುನಾವಣೆಗಳನ್ನು...

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ