ಕಚ್ಚಾ ವಸ್ತುಗಳನ್ನು ಮಾರ್ಪಡಿಸಿ ಸಿದ್ದ ವಸ್ತುಗಳನ್ನಾಗಿ ತಯಾರಿಸುವ ಘಟಕಗಳಿಗೆ ಕೈಗಾರಿಕೆ ಎನ್ನುವರು.
* ಭಾರತದ ಕೈಗಾರಿಕೆಗಳ ಪಿತಾಮಹ - ಜೆಮ ಷೆಡ್ ಜಿ ಟಾಟಾ
* ಭಾರತದ ಕೈಗಾರಿಕೆಗಳ ನಗರ - ಛೋಟಾ ನಾಗಪೂರ
* ಭಾರತದಲ್ಲಿ ಹೊಸ ಕೈಗಾರಿಕ ನೀತಿ ಜಾರಿಯಾದ ವರ್ಷ - 1991
* ಭಾರತದ ಕೈಗಾರಿಕೆಗಳ ಕುರಿತು ಒಂದೊಂದಾಗಿ ನೋಡಿಕೊಳೋಣ
* ಕಾಗದ ಕೈಗಾರಿಕೆ-
* ಭಾರತದಲ್ಲಿ ಮೊದಲ ಕಾಗದ ಕೈಗಾರಿಕೆಯು 1840 ರಲ್ಲಿ ಪಶ್ಚಿಮ ಬಂಗಾಳದ ಸೆರಾಂಪುರನಲ್ಲಿ ಸ್ಥಾಪನೆಯಾಯಿತು. 2ನೇ ಕಾಗದ ಕೈಗಾರಿಕೆಯು 1867 ರಲ್ಲಿ ಪಶ್ಚಿಮ ಬಂಗಾಳದ ಬಾಲಿಯಲ್ಲಿ ಸ್ಥಾಪನೆಯಾಯಿತು.
* ಭಾರತದಲ್ಲಿ ಕಾಗದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದೆ.
* ನ್ಯುಸ ಪ್ರಿಂಟ ಕೈಗಾರಿಕೆಯು 1955 ರಲ್ಲಿ ಮಧ್ಯಪ್ರದೇಶದ ನೇಪಾ ನಗರದಲ್ಲಿ ಸ್ಥಾಪನೆಯಾಯಿತು.
* ಹತ್ತಿ ಬಟ್ಟೆ ಕೈಗಾರಿಕೆ
* 1818 ರಲ್ಲಿ ಪಶ್ಚಿಮ ಬಂಗಾಳದ ಹೌರಾ ಎಂಬಲ್ಲಿ ಮೊದಲ ಹತ್ತಿ ಬಟ್ಟೆ ಕೈಗಾರಿಕೆಯು ಸ್ಥಾಪನೆಯಾಯಿತು.
* ನಂತರ 1854 ರಲ್ಲಿ ಮುಂಬೈಯಲ್ಲಿ ಎರಡನೆ ಹತ್ತಿ ಬಟ್ಟೆ ಕೈಗಾರಿಕೆಯು ಸ್ಥಾಪನೆಯಾಯಿತು.ಭಾರತದ ಮ್ಯಾಂಚೆಸ್ಟರ ಎಂದು ಮುಂಬೈ ಅನ್ನು ಕರೆಯುವರು.
* ಭಾರತದ ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
ಭಾಋತದಲ್ಲಿ ಪ್ರಥಮ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು 1874 ರಲ್ಲಿ ಪಶ್ಚಿಮ ಬಂಗಾಳದ ಕುಲ್ಟಿ ಎಂಬಲ್ಲಿ ಬೆಂಗಾಲ ಐರನ ಕಂಪನಿ ಸ್ಥಾಪನೆಯಾಗಿದೆ.
* ಟಾಟಾ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ - 1907 - ಜಾರ್ಖಂಡ
* ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ - 1923 - ಭದ್ರಾವತಿ
* ಬೊಕಾರೊ ಉಕ್ಕಿನ ಕೈಕಾರಿಕೆ - 1964 - ಜಾರ್ಖಂಡ
* ಭಿಲಾಯಿ ಉಕ್ಕಿನ ಕೈಗಾರಿಕೆ - 1955 - ಛತ್ತಿಸಘಡ
* ಸೆಲಂ ಉಕ್ಕಿನ ಕೈಗಾರಿಕೆ - 1982 - ತಮಿಳುನಾಡು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ