ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಒಂದು ಜೀವನದಲ್ಲಿ ಅಲ್ಪ ಪ್ರಮಾಣದ ಸಾಧನೆಯಾಗಿದೆ ಎಂದರು ತಪ್ಪಾಗಲಾರದು ಕಾರಣ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಾಗಿದ್ದು ನಾವು ಅವರೆಲ್ಲರನ್ನು ಹಿಂದಿಕ್ಕಿ ಉದ್ಯೋಗ ದೊರಕಿಸಿಕೊಳ್ಳಬೇಕಾದರೆ ಅದಕ್ಕೆ ತಕ್ಕ ಹಾಗೆ ತಯಾರಿಯನ್ನು ನಡೆಸಬೇಕಾಗುತ್ತದೆ.
ಸ್ನೇಹಿತರೆ ನಾವು ಎಷ್ಟರ ಮಟ್ಟಿಗೆ ಪರೀಕ್ಷೆಗಳನ್ನು ಎದುರಿಸಲು ಅರ್ಹರಿದ್ದೆವೆ ಎಂದು ತಿಳಿಯಲು ಪ್ರಶ್ನೇ ಪತ್ರಿಕೆಗಳನ್ನು ನೋಡಿಕೊಳ್ಳುವುದು ತುಂಬಾನೆ ಅವಶ್ಯಕವಾಗಿರುತ್ತದೆ, ಆದ್ದರಿಂದ ಇಂದಿನ ನಮ್ಮ ಈ ಲೇಖನದಲ್ಲಿ ಅತ್ಯಂತ ಪ್ರಮುಖ ಪ್ರಶ್ನೇಗಳ ಕುರಿತಾಗಿ ಈ ಕೆಳಗೆ ವಿವರಿಸಲಾಗಿದೆ....
1) ಹರ್ಷಚರಿತವನ್ನು ರಚಿಸಿದವರು ಯಾರು ?
1) ಹರ್ಷ
2) ಕಾಳಿದಾಸ
3) ಕಲ್ಹಣ
4) ಬಾಣಭಟ್ಟ
ಉತ್ತರ - ಬಾಣಭಟ್ಟ ( ಹರ್ಷ ಚರಿತೆಯು ಹರ್ಷನ ಜೀವನದ ಚರಿತ್ರೆಯಾಗಿದ್ದು, ಇದನ್ನು ಬಾಣಭಟ್ಟನು ಸಂಸ್ಕೃತ ಭಾಷೆಯಲ್ಲಿ ರಚಿಸಿದನು.)
2) ರಾಜಾರಾಮ ಮೊಹನರಾಯರವರು ಹೆಚ್ಚಾಗಿ ಕಾಳಜಿ ಹೊಂದಿದ್ದು ?
1) ವಿಧವಾ ಪುನರ ವಿವಾಹ
2) ಸತಿ ಪದ್ದತಿ ನಿರ್ಮೂಲನೆ
3) ಬಾಲ್ಯ ವಿವಾಹ
4) ಯಾವುದು ಅಲ್ಲಾ
ಉತ್ತರ - ಸತಿ ಪದ್ದತಿ ನಿರ್ಮೂಲನೆ ( ರಾಜಾ ರಾಮ ಮೊಹನ ರಾಯ್ ರವರು ವಿಧವಾ ಪುನರ್ ವಿವಾಹವನ್ನು ಪ್ರೋತ್ಸಾಹಿಸಿದರು, ಹೆಣ್ಣು ಶಿಶು ಹತ್ಯ ಬಾಲ್ಯ ವಿವಾಹ ವಿರುದ್ದ ಹೊರಾಡಿದರು, ಆದರೆ ಸತಿ ಪದ್ದತಿ ನಿರ್ಮೂಲನೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು, ಇವರ ಪ್ರಭಾವದಿಂದಾಗಿ ಲಾರ್ಡ ವಿಲಿಯಂ ನು 1828 ರಲ್ಲಿ ಸತಿ ಸಹಗಮನ ಪದ್ದತಿಯನ್ನು ನಿಷೇಧಿಸಿದನು.)
3) ನಕ್ಸಲಿಯ ಚಳುವಳಿಯು ಈ ಕೆಳಕಂಡ ರಾಜ್ಯದ ನಕ್ಸಲ್ ಬಾರಿ ಪ್ರದೇಶದಲ್ಲಿ ಉಗಮಿಸಿತು ?
1) ಅಸ್ಸಾಂ
2) ಕೇರಳ
3) ಪಶ್ಚಿಮ ಬಂಗಾಳ
4) ಆಂಧ್ರಪ್ರದೇಶ
ಉತ್ತರ - ಪಶ್ಚಿಮ ಬಂಗಾಳ ( ಇದು ಪ್ರಥಮ ಬಾರಿಗೆ 1967 ರಲ್ಲಿ ಪಶ್ಚಿಮ ಬಂಗಾಳದ ಬಾರಿಯಲ್ಲಿ ಜಮೀನ್ದಾರಿ ವಿರುದ್ದ ಹೋರಾಟ ಆರಂಭವಾಯಿತು. ಮುಂದೆ ಇದು ನಕ್ಸಲ್ ಚಳುವಳಿ ಎಂಬ ಹೆಸರನ್ನು ಪಡೆದುಕೊಂಡಿತು.)
4) ಅಡುಗೆ ಉಪ್ಪು ಮಳೆಗಾಲದಲ್ಲಿ ತೇವಾಂಶದಿಂದ ಕೂಡಿರುತ್ತದೆ ಕಾರಣ ?
1) ಸೋಡಿಯಂ ಕ್ಲೋರೈಡ್ ಜಲವಿಮೋಚಕ ಆಗಿದೆ
2) ಸೊಡಿಯಂ ಕ್ಲೋರೈಡ ಜಲಾಕರ್ಷಕ ಆಗಿದೆ.
3) ಸೋಡಿಯಂ ಕ್ಲೋರೈಡನಲ್ಲಿ ಮೇಗ್ನೆಷಿಯಂ ಕ್ಲೋರೈಡ ನಂತಹ ಜಲಾಕರ್ಷಕ ಅಶುದ್ದತೆಗಳಿವೆ.
4) ಯಾವುದು ಅಲ್ಲಾ
ಉತ್ತರ - 3) ಸೋಡಿಯಂ ಕ್ಲೋರೈಡನಲ್ಲಿ ಮೇಗ್ನೆಷಿಯಂ ಕ್ಲೋರೈಡ ನಂತಹ ಜಲಾಕರ್ಷಕ ಅಶುದ್ದತೆಗಳಿವೆ.
5) ಸಂಸತ್ತಿನ ಯಾವುದೆ ಸದನದ ನಡವಳಿಕೆಗಳಲ್ಲಿ ಭಾಗವಹಿಸುವ ಅಧಿಕಾರ ಈ ಕೆಳಕಂಡ ಯಾರಿಗಿದೆ ?
1) ಸಾಲಿಟರ ಜನರಲ್
2) ಉಪರಸಷ್ಟ್ರಪತಿ
3) ಅಟಾರ್ನಿ ಜನರಲ್
4) ಯಾರು ಅಲ್ಲಾ
ಉತ್ತರ - ಅಟಾರ್ನಿ ಜನರಲ್ ( ಇವರು ದೇಶದ ಅತ್ಯುನ್ನತ ಕಾನೂನು ಅಧಿಕಾರಿಯಾಗಿದ್ದು ಇವರು ಸಂಸತ್ತಿನ ಸದಸ್ಯರಲ್ಲದಿದ್ದರು ಕೂಡಾ ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸಬಹುದು.)
ಇದೆ ರೀತಿಯಾದ ಇನ್ನೂ ಹೆಚ್ಚಿನ ಪ್ರಶ್ನೇಗಳನ್ನು ಈ ನಮ್ಮ ಪೇಜನಲ್ಲಿ ಮುಂಬರುವಂತಹ ದಿನಗಳಲ್ಲಿ ಬರುತ್ತವೆ ಆದ್ದರಿಂದ ನಮ್ಮ ಪೇಜನು ಫಾಲೊ ಮಾಡಿ .

Cet ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ
ಪ್ರತ್ಯುತ್ತರಅಳಿಸಿ