2 ಲಕ್ಷ ಜನ ಭಾರತೀಯ ಪೌರತ್ವ ತ್ಯಜಿಸಲು ಕಾರಣವೇನು ?
ಭಾರತೀಯರು ಸ್ವದೇಶವನ್ನು ತೊರೆದು ವಿದೇಶದ ಪೌರತ್ವ ಪಡೆಯಲು ಕಾರಣವಾದರು ಏನಿರಬಹುದು ಎಂದು ತಿಳಿಯಲು ಈ ಮುಂದೆ ತಿಳಿಯೋಣ.
ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಇಲ್ಲಿ ಎಲ್ಲರನ್ನು ಸಮಾನ ದೃಷ್ಠಿಯಿಂದ ನೋಡಲಾಗುತ್ತದೆ, ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜಕಾರಣಿಗಳು ತಮ್ಮ ಬೆಳೆ ಬೆಯಿಸಿಕೊಳ್ಳಲು ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿ ಅವರನ್ನು ಒಡೆದು ಆಳುವ ಪದ್ದತಿಯಲ್ಲಿ , ಸಾರ್ವಜನಿಕ ಸಮಾರಂಭಗಳಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿ ಅವರ ವಿರುದ್ಧ ಭಾಷಣ ಮಾಡುವುದು ಇದು ಸಮಮನಸ್ಕರ ಭಾವನೆಗಳಿಗೆ ಒಂದು ರೀತಿಯಾಗಿ ಬೇಸರ ಉಂಟಾಗಿದ್ದು ಅವರುಗಳು ದೇಶವನ್ನು ತೊರೆಯಲು ಇದು ಒಂದು ಕಾರಣ.
ನಿರುದ್ಯೋಗ ಸಮಸ್ಯೆ.
ಭಾರತದ ರಾಜಕಾರಣಿಗಳು ಅಧಿಕಾರ ಹಿಡಿಯಲು ಯುವಕರಿಗೆ ಉದ್ಯೋಗ ನೀಡುವ ಭರವಸೆ ಮೂಲಕ ಅಧಿಕಾರ ಪಡೆದುಕೊಂಡು ನಂತರ ಪಕೋಡ ಮಾರಲು ಸಲಹೆಗಳನ್ನು ನೀಡುವ ಉದಾಹರಣೆಗಳನ್ನು ನಾವೀಗ ನೋಡಿದ್ದೆ ವೆ.
ಅಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ ಕೇಂದ್ರ ಸರ್ಕಾರ ಯಾವುದೇ ಉದ್ಯೋಗ ನೀಡದೆ ಯುವಕರಿಗೆ ಪಕೋಡಾ ಮಾರಲು ಸಲಹೆ ನಿಡಿದನ್ನು ನೋಡಿದರೆ ಜನರನ್ನು ಬಹಳಾನೆ ಸರಳವಾಗಿ ರಾಜಕಾರಣಿಗಳು ಯಾಮಾರಿಸುತ್ತಾರೆ.
ಯುವ ಜನತೆ ಉದ್ಯೋಗವಿಲ್ಲದೆ ಮನೆ ಸಮಾಜಕ್ಕೆ ಹೊರೆಯಾದ ಭಾವನೆಯಲ್ಲಿ ಅವರು ಉದ್ಯೋಗವನ್ನು ಅರಸುತ್ತಾ ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. "ಇತ್ತೀಚೆಗಿನ ಯುದ್ದಗಳಲ್ಲಿ ಭಾರತೀಯ ಯುವಕರನ್ನು ಉದ್ಯೋಗ ನೀಡುವ ಭರವಸೆ ನೀಡಿ ಯುದ್ದಗಳಲ್ಲಿ ಭಾಗಿಯಾಗಲು ಆ ದೇಶಗಳ ಸರ್ಕಾರ ಒತ್ತಾಯಿಸಿದನ್ನು ನಾವು ಓದಿದ್ದೇವೆ. ಹಾಗೆ ಅಲ್ಲೀನ ಪೌರತ್ವ ಪಡೆದು ಭಾರತಿಯ ಪೌರತ್ವ ತ್ಯಜಿಸಲು ತ್ತಿದ್ದಾರೆ.ನಿರುದ್ಯೋಗ ಸಮಸ್ಯೆ ಒಂದು ಯುವಕರನ್ನು ಸ್ವದೇಶ ಬಿಟ್ಟು ವಿದೇಶಕ್ಕೆ ತೆರಳುವಂತಾಗಿದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ