ಎಷ್ಟೇ ಓದಿದರು ಯಶಸ್ಸಿನ ಮೆಟ್ಟಿಲು ಹತ್ತಲು ಆಗುತ್ತಿಲ್ಲವೆ?
ಪ್ರೀತಿಯ ವಿದ್ಯಾರ್ಥಿ ಮಿತ್ರರೇ ಜೀವನಕ್ಕೊಂದು ಸುಂದರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಮುಗ್ದ ಮನಸ್ಸಿನ ಪ್ರಜ್ಞಾವಂತ ಯುವಕರೆ, ಸಮಯ ದಿನಗಳು ಯಾರಿಗಾಗಿ ಕಾಯದೆ ತಮ್ಮ ಕಾರ್ಯದಲ್ಲಿ ಮುಂದುವರೆದು ಬದಲಾಗುವುದನ್ನು ಜೀವನಶೈಲಿ ಮಾಡಿಕೊಂಡಿರುವಾಗ, ನಾವು ನೀವುಗಳು ಕೇವಲ ಒಂದೆರಡು ಪ್ರಯತ್ನಗಳಲ್ಲಿ ವಿಫಲವಾದ ನಂತರ ಕೈಚೆಲ್ಲಿ ಕುಳಿತುಕೊಳ್ಳದೆ ದೈರ್ಯದಿಂದ ಮುನ್ನುಗ್ಗಬೇಕು,
ಅಂದರೆ ಸಾಧನೆ ಮಾಡಲು ಹೊರಾಟಾಗ ಅನೇಕ ಅಡೆ ತಡೆಗಳು ಎದುರಾಗುವುದು ಸಹಜವೆ ಆಗಿರುತ್ತದೆ. ಕೇವಲ ಕೆಲವು ದಿನಗಳು, ತಿಂಗಳಲುಗಳು, ಓದಿದ ಮಾತ್ರಕ್ಕೆ ನಾವು ಅಂದಕೊಂಡ ಹಾಗೆ ಆಗದೆ ಹೊದರೆ ಮನಸ್ಸಿನಲ್ಲಿದ್ದ ಹುಮ್ಮಸ್ಸು ಆಶಾ ಭಾವನೆ ಹೊರಟು ಹೊಗುವುದು ಸಹಜವೇ ಆಗಿರುತ್ತದೆ, ಇಂತಹ ಭಾವನೆಯನ್ನು ಹೊಗಲಾಡಿಸಲು ನಾನು ಈ ದಿನ ನಿಮಗೆ ಒಂದು ಚಿಕ್ಕ ಕಥೆಯನ್ನು ಹೇಳುತ್ತೇನೆ.
" ಒಂದು ಗುರುಕುಲದಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಗುರುಗಳ ಹತ್ತೀರ ಓದುತ್ತೀರುವಾಗ, ಗುರುಗಳು ಅವರಿಗೆ ಒಂದು ಸ್ಪರ್ಧೆಯನ್ನು ಏರ್ಪಡಿಸುತ್ತಾರೆ, ಅದೆನೆಂದರೆ ತಮಗೆ ಯಾರು ಬಾವಿ ತೊಡಿ ಕುಡಿಯಲು ನೀರು ತಂದುಕೊಡುವರೊ ಅವರು ವಿಜಯಶಾಲಿಗಳು ಎಂದು ಹೇಳಿದಾಗ, ಪ್ರತಿಯೊಬ್ಬ ವಿದ್ಯಾರ್ಥಿಯು ಹುರುಪಿನೊಂದಿಗೆ ಕೆಲಸವನ್ನು ಪಾರಂಭಿಸಿದರು.
ವಿದ್ಯಾರ್ಥಿಗಳು ಅಗೆಯಲು ಪ್ರಾರಂಭಿಸಿ ಚಿಕ್ಕ ಚಿಕ್ಕ ಕುಣಿಗಳನ್ನು ತೊಡುವುದು ಮತ್ತೆ ಮತ್ತೊಂದು ಕುಣಿಯನ್ನು ತೊಡುವುದು ಇದೇ ರೀತಿಯಾಗಿ ಮುಂದುವರೆಸಿದರು ಸಮಯ ಕಳೆದಹಾಗೆ ವಿದ್ಯಾರ್ಥಿಗಳು ಭೂಮಿಯನ್ನು ಅಗೆಯದೆ ಭೂಮಿಯ ಒಳಗೆ ನೀರು ಇಲ್ಲವೆಂದು ಭೂಮಿ ಅಗೆಯುವುದನ್ನು ಅಲ್ಲಿಗೆ ಬಿಟ್ಟರು.
ಮರಳಿ ತಮ್ಮ ಗುರುವಿನಲ್ಲಿ ಬಂದು ತಮಗಾದ ಅನುಭವವನ್ನು ಹಂಚಿಕೊಂಡರು, ಆಗ ಗುರುಗಳು ತಮ್ಮ ವಿದ್ಯಾರ್ಥಿಗಳಲ್ಲಿನ ತಾಳ್ಮೆ ಶಕ್ತಿಯ ಕುರಿತಾಗಿ ಮರುಕವನ್ನು ವ್ಯಕ್ತಪಡಿಸಿದರು. ನಂತರ ಪುನಹ ಅವರು ವಿದ್ಯಾರ್ಥಿಗಳಿಗೆ ತಾವುಗಳು ಅಗೆಯುತ್ತಿದ್ದ ಜಾಗವನ್ನು ಅಗೆಯಲು ಹೇಳಿದರು. ಆಗ ಪ್ರತಿಯೊಬ್ಬ ವಿದ್ಯಾರ್ಥಿಯು ಒಲ್ಲದ ಮನಸ್ಸಿನಿಂದ ಪುನಹ ತಮ್ಮ ಕಾರ್ಯವನ್ನು ಪ್ರಾರಂಭಿಸಿದರು 60 ಮೀಟರ, 70 ಮೀಟರ, ಅಗೆಯುತ್ತಾ ಹೀಗೆ ಮುಂದೆ ಸಾಗಿದಾಗ ಸ್ವಲ್ಪ ಸಮಯದ ನಂತರ ಅವರುಗಳಿಗೆ ಭೂಮಿಯಿಂದ ನೀರು ಬರುವುದನ್ನು ಕಂಡಾಗ ಅವರ ಆನಂದಕ್ಕೆ ಪಾರವೆ ಇಲ್ಲದೆ ರೀತಿಯಲ್ಲಿ ಅವರು ಕುಣಿದು ಕುಪ್ಪಳಿಸಿದರು.
ಮರಳಿ ಗುರುವಿನಲ್ಲಿ ಬಂದು ತಿಳಿಸಿದಾಗ, ಗುರುಗಳು ಹೇಳಿದ ಮಾತುಗಳು ಅಕ್ಷರಶ ಅವರನ್ನು ಚಕಿತಗೊಳಿಸಿದವು. ಅಂದು ಗುರುಗಳು ಹೇಳಿದ ಮಾತುಗಳು ಏನಂದರೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಪಡೆಯಲು ದೃಢ ಸಂಕಲ್ಪ, ಇಚ್ಛಾ ಭಾವನೆ, ಹಾಗೆ ಹಿಡಿದ ಕಾರ್ಯವನ್ನು ಬಿಡದೆ ಮಾಡದಿದ್ದಾಗ ಮಾತ್ರ ಅವರಲ್ಲಿ ಖಂಡಿತಾ ಯಶಸ್ಸು ದೊರಕುತ್ತದೆ.
ಇಲ್ಲಿ ಗುರುಗಳ ಮಾತಿನ ತಾತ್ಪರ್ಯ ನೋಡುವುದಾದರೆ, ನಾವು ಓದುವ ಪ್ರತಿ ವಿಷಯಗಳ ಸಂಪೂರ್ಣ ಮಾಹಿತಿಯು ಪಡೆದು ಸತತವಾಗಿ ಪ್ರಯತ್ನಿಸಿದಾಗ ಮಾತ್ರ ಯಶಸ್ಸಿನ ಉತ್ತುಂಗಕ್ಕೆ ಏರಲು ಸಾದ್ಯಾವಾಗುತ್ತದೆ.
ವಿದ್ಯಾರ್ಥಿ ಮೀತ್ರರೇ ಅತಿ ಶಿಘ್ರದಲ್ಲೆ ಹೊಸದಾಗಿ ನೇಮಕಾತಿ ಪ್ರಕ್ರಿಯೆಗಳು ಶುರುವಾಗಲ್ಲಿದ್ದು ತಾವುಗಳು ಇಂದಿನಿಂದಲ್ಲೆ ನಿರಂತವಾದ ಅಭ್ಯಾಸವನ್ನು ಪ್ರಾರಂಭಿಸಿ ಅಭ್ದುತವಾದ ಯಶಸ್ಸು ತಮಗೆ ದೊರೆಯಲೆಂದು ಹಾರೈಸುವೆ.
ಹಾಗೆ ಒಂದು ಮಾತು ವಿದ್ಯಾರ್ಥಿ ಮೀತ್ರರೆ
ನಿಮ್ಮ ತಂದೆ ತಾಯಿಯ ಶ್ರಮಕ್ಕೆ ಅಂದರೆ ಅವರು ನಿಮಗೆ ನೀಡುವ ಪ್ರತಿ ಒಂದು ರೂಪಾಯಿಗೂ ಬೆಲೆ ನೀಡಿ, ಆ ಹಣ ನಿಮ್ಮ ಕೈ ಸೇರಲು ಅದೆಷ್ಟೋ ತಂದೆ ತಾಯಿಗಳು ಬಿಸಿಲು ಮಳೆಗಳಲ್ಲಿ ದುಡಿದು ನಿಮಗಾಗಿ ನೀಡಿರುತ್ತಾರೆ. ನಿಮ್ಮ ಯಶಸ್ಸು ಅವರ ಬಲವಾಗುತ್ತದೆ.....

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ