ಸಂವಿಧಾನದಲ್ಲಿ ಪೌರತ್ವ ಕುರಿತು.
ಭಾರತ ಸಂವಿಧಾನದ ಎರಡನೆಯ ಭಾಗವು "ಪೌರತ್ವದ" ಕುರಿತು ತಿಳಿಸುತ್ತದೆ. 5 ರಿಂದ 11 ವರೆಗೆ ಬರುವ ವಿಧಿಗಳು ಪೌರತ್ವ ಕುರಿತು ವಿವರಣೆಯನ್ನು ನೀಡುತ್ತವೆ. ಹಾಗೂ ಭಾರತದ ಸಂವಿಧಾನವು ಒಂದೆ ಪೌರತ್ವವನ್ನು ಪ್ರತಿಪಾದಿಸುತ್ತದೆ.
ಭಾರತದ ಪೌರತ್ವಕ್ಕೆ ಯಾರು ಅರ್ಹರು ?
ಭಾರತದ ಪೌರತ್ವಕ್ಕೆ ಸಂಬಂಧಿಸಿದಂತೆ "ಪೌರತ್ವ ಕಾಯ್ದೆ 1955 " ತಿಳಿಸುತ್ತದೆ. ಇದರ ಕುರಿತಾಗಿ ಮುಂದೆ ನೋಡೋಣಾ ಗೆಳೆಯರೆ.
ಪೌರತ್ವ ಕಾಯ್ದೆ 1955 ರ 3, 4, 5, 6, ಮತ್ತು 7 ನೇ ಸೆಕ್ಷನಗಳು ಪೌರತ್ವ ಪಡೆದುಕೊಳ್ಳುವ ರೀತಿಯ ಕುರಿತು ವಿವರಣೆಯನ್ನು ನೀಡುತ್ತವೆ.
ಸೆಕ್ಷನ್ 3 :-
ಇದು ಹುಟ್ಟಿದ ಆಧಾರದ ಮೇಲೆ ಪೌರತ್ವ ನೀಡುವ ಕುರಿತು ತಿಳಿಸುತ್ತದೆ. *) 1950 ಜನವರಿ 26 ಅಥವಾ 1987 ಜುಲೈ 1 ಕ್ಕೂ ಮೊದಲು ಅನಿಸಿರಬೇಕು. *) 2003 ರ ಪೌರತ್ವ ತಿದ್ದುಪಡಿ ಕಾಯ್ದೆಗೂ ಮುನ್ನ ಅನಿಸಿರಬೇಕು, ಮತ್ತು ಅವರು ಹುಟ್ಟಿದಾಗ ಅವರ ತಂದೆ/ತಾಯಿ ಯಾರಾದರು ಒಬ್ಬರು ಭಾರತದ ಪೌರರಾಗಿರಬೇಕು. *) 2003 ರ ಪೌರತ್ವ ಕಾಯ್ದೆ ತಿದ್ದುಪಡಿ ಜಾರಿಯಾದ ನಂತರ ಜನಿಸಿದರೆ ಅವರ ತಂದೆ ಮತ್ತು ತಾಯಿ ಇಬ್ಬರೂ ಪೌರರಾಗಿರಬೇಕು, ಇಲ್ಲವೆ ಇಬ್ಬರ ಪೈಕಿ ಒಬ್ಬರು ಪೌರರಾಗಿದ್ದು ಇನ್ನೊಬ್ಬರು ಅಕ್ರಮ ವಲಸಿಗರಾಗಿಲ್ಲದಿದ್ದರೆ ಆ ವ್ಯಕ್ತಿಗೆ ಹುಟ್ಟಿನ ಮೂಲಕ ಪೌರತ್ವ ದೊರಕುತ್ತದೆ .
ಸೆಕ್ಷನ್ 4 :-
ಇದು ವಂಶಪಾರಂಪರ್ಯವಾಗಿ ಹೇಗೆ ಪೌರತ್ವ ದೊರಕುತ್ತದೆ ಎಂದು ವಿವರಿಸುತ್ತದೆ. ಸೆಕ್ಷನ್ 4 (ಎ) ಪ್ರಕಾರ 1950 ಜನವರಿ 26 ರೈ ನಂತರದಲ್ಲಿ ಜನಿಸಿರಬೇಕು, ವ್ಯಕ್ತಿಯು ಜನಿಸಿದಾಗ ಅವರು ತಂದೆಯು ಭಾರತದ ಪೌರರಾಗಿರಬೇಕು.
1992 ಡಿಸೆಂಬರ್ 10 ನಂತರ ಜನಿಸಿದ್ದು ಅವರ ತಂದೆ/ ತಾಯಿ ಯಾರಾದರು ಒಬ್ಬರು ಭಾರತದ ಪೌರರಾಗಿದ್ದರೆ ಅವರಿಗೆ ವಂಶಪಾರಂಪರ್ಯವಾಗಿ ಭಾರತದ ಪೌರತ್ವ ಲಭಿಸುತ್ತದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ